ಪೇಪರ್ ಮಿಂಟ್ ಜ್ಯೂಸ್ ಪುದೀನಾ ಸೊಪ್ಪು

ಪುದಿನಾ ಸೊಪ್ಪು ಚಿಕ್ಕ ಚಿಕ್ಕ ಎಲೆಗಳಿಂದ ಕೂಡಿದ ಚಿಕ್ಕ ಗಿಡವಾಗಿದೆ ಇದು ತುಂಬಾ ಸುವಾಸನೆ ಭರಿತವಾಗಿದೆ ಇದು ಜೀರ್ಣಕಾರಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ ಮೈಗ್ರೇನ್ ತಲೆನೋವಿಗೆ ಒಳ್ಳೆಯದು ಪೆಪ್ಪರ್ಮಿಂಟ್ ಆಯ್ಲ್ ಒಳ್ಳೆಯದು ಪುದಿನ ಸೊಪ್ಪಿನ ರಸ ಮೂಗು ಕಟ್ಟಿರುವುದನ್ನು ಕಡಿಮೆಮಾಡುತ್ತದೆ ಇದರ ಜ್ಯೂಸ್ ಹೆಂಗಸರಿಗೆ ತಿಂಗಳಿನ ಸಮಯದಲ್ಲಾಗುವ ನೋವನ್ನು ಕಡಿಮೆ ಮಾಡುತ್ತದೆ

ಬೇಕಾಗುವ ಸಾಮಾನುಗಳು

ಪುದಿನ ಎಲೆ ಒಂದು ಮುಷ್ಟಿ ಜೀರಿಗೆ 2 ಚಮಚ ಕರಿಮೆಣಸಿನ ಕಾಳು 1 ಚಮಚ ತೆಂಗಿನ ಹಾಲು ಅಥವಾ ತೆಂಗಿನತುರಿ 1 ಲೋಟ ಮಜ್ಜಿಗೆ ಅಥವಾ ನಿಂಬು ರಸ

ಮಾಡುವ ವಿಧಾನ

ಪುದೀನಾ ಎಲೆ ಜೀರಿಗೆ ಕರಿಮೆಣಸಿನ ಕಾಳು ತೆಂಗಿನ ತುರಿ ಇವಿಷ್ಟನ್ನು ಸಣ್ಣ ಬೀಸಿ ಅದಕ್ಕೆ ಒಂದು ಲೋಟ ಮಜ್ಜಿಗೆ ಅಥವಾ ಅರ್ಧ ಕಡಿ ನಿಂಬು ರಸ ಹಾಕಬೇಕು ಇದಕ್ಕೆ ಸ್ವಲ್ಪ ಉಪ್ಪು ಅಥವಾ ಬೆಲ್ಲ ಹಾಕಬಹುದು ಇದನ್ನು ಬಿಸಿ ಮಾಡಿ ಕುಡಿಯುವುದು ಇದ್ದರೆ ಅದಕ್ಕೆ ಮಜ್ಜಿಗೆ ಹಾಕಬಾರದು ನಿಂಬೆರಸ ಹಾಕಬೇಕು ಇಷ್ಟಾದರೆ ಜ್ಯೂಸ್ ರೆಡಿ

2 ನೇ ವಿಧಾನ .

1 ಲೋಟ ನೀರಿಗೆ 8 ಪುದೀನಾ ಎಲೆಗಳನ್ನು ಹಾಕಿ ಕುದಿಸಿದರೆ ಪ್ರದೀನಾ ಟೀ ರೆಡಿ. ಇದಕ್ಕೆ ಶುಂಠಿ ಕೂಡ ಹಾಕಬಹುದು..ಇದನ್ನು ದಿನ ಕುಡಿದರೆ ನೆಗಡಿ ಕಡಿಮೆ ಆಗುತ್ತದೆ.

ಪ್ರದೀವಾ ಸೊಪ್ಪನ್ನು ಅನೇಕ ಪಾನೀಯ ಗಳ ತಯಾರಿಕೆಯಲ್ಲಿ ಚಟ್ನಿ ಸಾರು ಸಾಂಬಾರ್ ಕೋಸುಂಬರಿ ಪಲಾವ್ ಮಾಂಸದ ಅಡಿಗೆಯಲ್ಲಿ ಬಳಸಬಹುದು. ಇದರಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶವಿದ್ದು ಶರೀರದ ಉಷ್ಣ್ಲತೆಯನ್ನು ಕಾಪಾಡಲು ನೆರವಾಗುತ್ತದೆ.

ಪುದೀನಾ ಸೂಪ್

ಅರ್ಧ ಮುಷ್ಟಿ ಪುದೀನಾ ಲವ0ಗ 2. ಬೆಳ್ಳುಳ್ಳಿ 1. ಕಾಳು ಮೆಣಸು 8 – 10 ಟೊಮಾಟಿ ಹಣ್ಣು 2. ಇನಿಷ್ಟನ್ನು ನುಣ್ಣಿಗೆ ಬೀಸಿ ಕುದಿಸಿ ಅದಕ್ಕೆ 1 ಚಮಚ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಊಟದ ಮೊದಲು 1 ಕಪ್ ಕುಡಿದರೆ ಒಳ್ಳೆಯದು ( ಆಹಾರದ ಮೊದಲು) ಇವಿಷ್ಟು ಸಾಮಾನುಗಳಿಗೆ 4 ಕಪ್ ಸೂಪ್ ಮಾಡಬಹುದು.

How To Use Fenugreek (Methi) For Diabetes & Benefits (Tasty Methods!)

ಅಧರಕ್ಕೆ ಕಹಿ ಉದರಕ್ಕೆ ಸಿಹಿ ಎಂಬ ಗಾದೆ ಮಾತಿನಂತೆ ಮೆಂತೆಯ ಗುಣವಾಗಿದೆ ಗರ್ಭಿಣಿಯರು ಮತ್ತು ಶಿಶು ಇವರನ್ನು ಬಿಟ್ಟರೆ ಎಲ್ಲರೂ ಮೆಂತೆಯನ್ನು ಬಳಸಬಹುದು ಆದರೆ ಮೆಂತೆಯನ್ನು ಉಳಿದ ಧಾನ್ಯಗಳ ರೀತಿಯಲ್ಲಿ ಬಳಸಲಿಕ್ಕೆ ಆಗುವುದಿಲ್ಲ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಳಸಬೇಕು

ಮೆಂತೆಯಲ್ಲಿ ಫೈಯರ್ಸ್ ಮಿನರಲ್ಸ್ ಐರನ್ ಮತ್ತು ಮೆಗ್ನೀಷಿಯಂ ಹೊಂದಿದೆ ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಂಟ್ರೋಲ್ನಲ್ಲಿ ಇಡುವುದರಿಂದ ಒಂದು ಮತ್ತು 2 ಡಯಾಬಿಟಿಕ್ ನವರಿಗೆ ಒಳ್ಳೆಯದು ಇವರು ಮೆಂತ್ಯೆಯನ್ನು ವಿವಿಧ ರೀತಿಯಲ್ಲಿ ಬಳಸುವುದು ವಿವಿಧ ರೀತಿಯ ಆಹಾರಗಳ ಜೊತೆಗೆ ಇದನ್ನು ಬಳಸಿದರೆ ಇದರ ಕಹಿಯಾದ ಗುಣವು ಮತ್ತು ಪರಿಮಳವೂ ರುಚಿಕರವಾಗಿ ಮಾರ್ಪಾಡಾಗುತ್ತದೆ ಇಲ್ಲಿ ನಾನು ಡಯಾಬಿಟಿಕ್ ಪೇಷಂಟ್ ನವರು ಯಾವ ಯಾವ ರೀತಿಯಲ್ಲಿ ರುಚಿಕರವಾಗಿ ಆಹಾರವನ್ನಾಗಿ ಮೆಂತೆಯನ್ನು ಬಳಸಬಹುದು ಎಂಬುದನ್ನು ತಿಳಿಸುತ್ತೇನೆ ಮುಕ್ತವಾಗಿ ಡಯಾಬಿಟಿಕ್ ನವರಿಗೆ ಎಲ್ಲರಂತೆ ತಾವು ಸಿಹಿಯನ್ನು ತಿನ್ನಬೇಕೆನಿಸುತ್ತದೆ ಆದರೆ ಎಲ್ಲರಂತೆ ತಿನ್ನುವ ಹಾಗಿಲ್ಲ ಜ್ಯೂಸನ್ನು ಕುಡಿಯುವ ಹಾಗಿಲ್ಲ ಆದರೆ ಮೆಂತೆಯನ್ನು ಯಾವ ಯಾವ ರೀತಿಯಲ್ಲಿ ಬಳಸಬಹುದು ಎಂಬ ಮಾಡುವ ಕ್ರಮವನ್ನು ತಿಳಿಸುತ್ತೇನೆ

ಮೆಂತೆ ಜ್ಯೂಸ್

4 ಚಮಚ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಡಬೇಕು ಅದಕ್ಕೆ ಎರಡು ಏಲಕ್ಕಿ ಹಾಕಿ ನುಣ್ಣಗೆ ಬೀಸಬೇಕು ಅದಕ್ಕೆ 2 ಚಮಚ ಬೆಲ್ಲ ಅರ್ಧಲೋಟ ಹಾಲು ಅಥವಾ ತೆಂಗಿನ ಹಾಲು ಅರ್ಧ ಲೋಟ ಮತ್ತು ನೀರನ್ನು ಹಾಕಬಹುದು ಜ್ಯೂಸು ದಪ್ಪವಾದ ಬೇಕೆಂದರೆ 2 ಚಮಚ ಮೆಂತೆ ಕಾಳನ್ನು ಜಾಸ್ತಿ ಹಾಕಬೇಕು ಇದನ್ನು ಬೀಸುವಾಗ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಇರಬೇಕು ಇದಕ್ಕೆ ಬೆಲ್ಲ ಬೇಡವೆಂದರೆ ಚಿಟಿಕೆ ಉಪ್ಪನ್ನು ಹಾಕಬಹುದು ಎಲ್ಲರಂತೆ ಡಯಾಬಿಟಿಸ್ ಇದ್ದವರು  ಕುಡಿಯಬಹುದು ಬೆಳಿಗ್ಗೆ ಒಂದು ಲೋಟ ಸಂಜೆ ಒಂದು ಲೋಟ ಕುಡಿಯಬಹುದು ಅಲರ್ಜಿ ಇದ್ದವರು ಅರ್ಧ ಲೋಟ  ಕುಡಿಯಬಹುದು

ಮೆಂತೆ ಹಿಟ್ಟು

ಅರ್ಧ ಕಪ್ಪು ಮೆಂತೆ ಅರ್ಧ ಕಪ್ಪು ್ದ ಉದ್ದು ಅರ್ಧ ಕಪ್ ಹೆಸರುಕಾಳು ಒಂದು ಕಪ್ಪು ಕಡಲೆಬೇಳೆ ಒಂದು ಕಪ್ಪು ಎಳ್ಳು ಜೀರಿಗೆ ಅರ್ಧ ಕಪ್ 4 ಚಮಚ ಮೆಣಸಿನ ಕಾಳು ಒಂದು ಚಮಚ ಓಂಕಾಳು ಇವೆಲ್ಲವನ್ನೂ ಬೇರೆಬೇರೆಯಾಗಿ ಹುರಿದು ಒಂದು ಚಮಚ ಉಪ್ಪು ಇವೆಲ್ಲವನ್ನು ಸೇರಿಸಿ ಹಿಟ್ಟು ಮಾಡಬೇಕು ಬೇರೆಬೇರೆ  ಧಾನ್ಯಗಳನ್ನು  ಸೇರಿಸಬಹುದು  ಆಗ  ಮೆಂತೆಯ ಪ್ರಮಾಣವನ್ನು  ಜಾಸ್ತಿ ಮಾಡಬೇಕು ಹಿಟ್ಟನ್ನು  ಒಂದು ಬಾಕ್ಸ್ ನಲ್ಲಿ ಗಾಳಿಯಾಡದಂತೆ  ತುಂಬಿ ಇಟ್ಟರೆ  ಒಂದು ತಿಂಗಳು  ಇರುತ್ತದೆ ಈ ಎಲ್ಲವನ್ನೂ ಸೇರಿಸಿ ಮಾಡಿದ ಹಿಟ್ಟಿಗೆ  ಮೆಂತೆ ಹಿಟ್ಟು ಎನ್ನುವರು ದಿನಾಲು 1 ಚಮಚ ಮೆಂತೆ ಹಿಟ್ಟನ್ನು ಸ್ವಲ್ಪ ತುಪ್ಪದೊಂದಿಗೆ ಅನ್ನದ ಜೊತೆಗೆ ಸೇರಿಸಿ ಊಟ ಮಾಡಬೇಕು ಅವರ ಆಹಾರ ಯಾವುದು ಅದರ ಜೊತೆಗೆ ಸೇರಿಸಿ ತಿನ್ನಬಹುದು ಇದು ಡಯಾಬಿಟಿಸ್ ಇದ್ದವರಿಗೆ ಒಳ್ಳೆಯದು ಇದನ್ನು ಎಲ್ಲರೂ ತಿನ್ನಬಹುದು

ಮೆಂತೆ ನೀರು

ರಾತ್ರಿ ಅರ್ಧ ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಬೇಕು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತೆಕಾಳನ್ನು ಇಡಿಯಾಗಿ ನುಂಗಿ ಆ ನೀರನ್ನು ಕುಡಿಯಬೇಕು ಡಯಾಬಿಟಿಸ್ ಇದ್ದವರಿಗೆ ಒಳ್ಳೆಯದು ಮಂಡಿ ನೋವಿಗೂ ಇದು ತುಂಬಾ ಒಳ್ಳೆಯದು

ಮೆಂತೆ ದೋಸೆ

ಒಂದು ಲೋಟ ಅಕ್ಕಿ ಅಥವಾ ಯಾವುದೇ ದಾನ್ಯ ಅದಕ್ಕೆ 2 ಚಮಚ ಮೆಂತೆ ಮೂರು ತಾಸು  ನೀರಿನಲ್ಲಿ ನೆನೆಸಿಡಬೇಕು ರಾತ್ರಿ ಮಿಕ್ಸರ್ ನಲ್ಲಿ ಬೀಸಿ ಬೆಳಿಗ್ಗೆ ದೋಸೆ ಮಾಡಿದರೆ ತುಂಬಾ ರುಚಿ ಗರಿಗರಿಯಾದ ದೋಸೆ ಆಗುತ್ತದೆ ಹಿಟ್ಟಿಗೆ ಸ್ವಲ್ಪ ಉಪ್ಪು ಬೆಲ್ಲ ಬೇಕಾದರೆ ಹಾಕಬಹುದು ಮೆಂತೆ ಸೊಪ್ಪಿನಿಂದ ಲು ದೋಸೆ ಮಾಡಬಹುದು ಅಥವಾ ರೊಟ್ಟಿ ಮಾಡಬಹುದು

ಮೆಂತೆ ಇಡ್ಲಿ

ಮೆಂತೆ ಇಡ್ಲಿಯೋ ತುಂಬಾ ರುಚಿಕರವಾದ ತಿಂಡಿ ಇದನ್ನು ಬೆಳಿಗ್ಗೆ ಮಾಡಬಹುದು ಇದಕ್ಕೆ ಬೇಕಾಗುವ ಸಾಮಾನುಗಳು.

ಅರ್ಧ ಲೋಟ ಮೆಂತೆ ನೀರಲ್ಲಿ ಎರಡು ತಾಸು ನೆನಸಬೇಕು ನಂತರ ಅದನ್ನು ನುಣ್ಣಗೆ ಬೀಸಬೇಕ ಅದಕ್ಕೆ ಒಂದು ಲೋಟ ಅಕ್ಕಿ ರವಾ ಅಥವಾ ಇಡ್ಲಿ ರವ ಹಾಕಬೇಕು ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ರುಚಿಗೆ ಬೇಕಾದಷ್ಟು ಬೆಲ್ಲ ಹಾಕಬೇಕು ಅದಕ್ಕೆ ಗೋಡಂಬಿ ಬಾದಾಮಿ ಶೇಂಗಾ ಚಿಕ್ಕ ಪೀಸುಗಳನ್ನು ಮಾಡಿ ಹಾಕಬೇಕು ಇಡ್ಲಿ ಕುಕ್ಕರ್ ನಲ್ಲಿ ಬೇಯಿಸಬೇಕು ಇದು ತುಂಬಾ ರುಚಿಕರವಾಗಿ ಮತ್ತು ಪರಿಮಳಯುಕ್ತ ವಾಗಿರುತ್ತದೆ ಆರೋಗ್ಯಕ್ಕೂ ಒಳ್ಳೆಯದು

ಮೆಂತೆ ಎರಿಎವು ಅಥವಾ ಎಣ್ಣೆ ಮುಳುಕ

ಒಂದು ಲೋಟ ಅಕ್ಕಿ ಗೆ ಅರ್ಧ ಲೋಟ ಮೆಂತೆಯನ್ನು ಹಾಕಿ ಮೂರು ತಾಸು ನೆನಸಬೇಕು ಅದಕ್ಕೆ ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಬೀಸಬೇಕು ದೋಸೆ ಹಿಟ್ಟಿನಂತೆ ಇರಬೇಕು ಬೀಸುವಾಗ ತೆಂಗಿನಕಾಯಿ ತುರಿಯನ್ನು ಒಂದು ಹುಟ್ಟು ಹಾಕಬಹುದು. ಚಿಕ್ಕ ಬಂಡಿಗೆ ಎಣ್ಣೆ ಹಾಕಿ ಸ್ಟೋನ ಮೇಲೆ ಇಟ್ಟಿರಿ ಎಣ್ಣೆ ಕಾದ ನಂತರ ಒಂದು ಹುಟ್ಟು ಹಿಟ್ಟನ್ನು ಬಂಡಿಗೆ ಹಾಕಬೇಕು ಬಂಡಿಯಲ್ಲಿ ಅದು ಕೆಂಪಗೆ ಬೆಂದನಂತರ ತೆಗೆದು ಬಿಸಿಬಿಸಿಯಾಗಿ ತಿಂದರೆ ರುಚಿಯೋ ರುಚಿ ಅದರಲ್ಲಿ ಎಣ್ಣೆ ಜಾಸ್ತಿ ಎನಿಸಿದರೆ ಹಿಂಡಬಹುದು

ಕಡಿಗಾಯಿ( ಉಪ್ಪಿನಕಾಯಿ)

ಮಾವಿನಕಾಯಿ ಹೋಳು ಎರಡು ಲೋಟ, ಜೀರಿಗೆ 1ಹುಟ್ಟು ಸಾಸಿವೆ ಎರಡು ಹುಟ್ಟು , 4 ಲವಂಗ, ಓಂಕಾಳು ಎರಡು ಚಮಚ ,ಸ್ವಲ್ಪ ಉಪ್ಪು .ಜೀರಿಗೆ ಸಾಸಿವೆ ಲವಂಗ ಓಂಕಾಳು ಇವಿಷ್ಟನ್ನು ಹುರಿದು ಹಿಟ್ಟು ಮಾಡಿ ಮಾವಿನಕಾಯಿಗೆ ಹಾಕಬೇಕು ನಂತರ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ 1 ಹುಟ್ಟು ಮೆಂತೆಯನ್ನು ಹಾಕಿ ಕೆಂಪಗಾದ ನಂತರ ಅದನ್ನು ಅದು ತಣ್ಣಗಾದ ಮೇಲೆ ಮಾವಿನಕಾಯಿಗೆ ಹಾಕಿ ಸೇರಿಸಬೇಕು ಎಲ್ಲವನ್ನು ಸರಿಯಾಗಿ ಕಲಿಸಿ ಭರಣಿಯಲ್ಲಿ ಗಾಳಿಯಾಡದಂತೆ ಮುಚ್ಚಿರಬೇಕು ಇದು ತುಂಬಾ ರುಚಿಯಾಗಿರುತ್ತದೆ ಮತ್ತು ಡಯಾಬಿಟೀಸ್ ನವರಿಗೆ ಒಳ್ಳೆಯದು ಇದು 4 ದಿವಸದ ನಂತರ ತಿನ್ನಲಿಕ್ಕೆ ರುಚಿಯಾಗಿರುತ್ತದೆ ಇದರಲ್ಲಿರುವ ಮೆಂತೆಯ ಉಪ್ಪು ಕಾರ ಮತ್ತು ಎಣ್ಣೆಯನ್ನು ಕುಡಿದು ತುಂಬಾ ರುಚಿಯಾಗಿರುತ್ತದೆ

ಕರೋನವೈರಸ್ ತಡೆಗೆ. How to control cold virus.

ಈಗ ಜಗತ್ತಿನಲ್ಲಿ ಕರೋನವೈರಸ್ ತೊಂದರೆ ಉಂಟು ಮಾಡುತ್ತಿರುವ ಈ ಸಂದರ್ಭದಲ್ಲಿ ಯಾವುದಾದರೂ ರೀತಿಯಲ್ಲಿ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಈ ವಿಚಾರ ನನಗೆ ಬಂದಿತ್ತು .

ಜಗತ್ತಿನಲ್ಲಿ ವಿವಿಧ ರೀತಿಯ ಆಹಾರ ಒಂದು ಫ್ಯಾಷನ್ ಆಗಿದೆ. ಅದರಲ್ಲಿ ರೆಡಿಮೇಡ್ ಆಹಾರ, ತಂಪಾದ ,ಬಿಸಿಯಾದ ,ಎಣ್ಣೆ ಇಲ್ಲದೆ ಎಣ್ಣೆ ಇರುವುದು ಹಣ್ಣು, ಧಾನ್ಯ ಸಸ್ಯಗಳು ಹೀಗೆ ಅನೇಕ ತರಹದ ಆಹಾರವನ್ನು ಜನರು ಇಷ್ಟಪಡುತ್ತಿದ್ದಾರೆ. ಆದರೆ ಪ್ರಾಣಿಗಳಲ್ಲಿ ಈ ರೀತಿ ಇಲ್ಲ ಅವರಿಗೆ ಈ ರೀತಿಯ ವಿವಿಧತೆಯ ಆಹಾರವನ್ನು ತಿನ್ನಲಿಕ್ಕೆ ಸಾಧ್ಯವಿಲ್ಲ. ಆದರೂ ಪ್ರಾಣಿಗಳು ನಮಗಿಂತ ಆರೋಗ್ಯ ಹೇಗೆ ?ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಇರಲೇಬೇಕು.

ಪ್ರಾಣಿಗಳು ನ್ಯಾಚುರಲ್ ಆಗಿ ಸಿಗುವಂತಹ ಆಹಾರವನ್ನು ಸೇವಿಸುತ್ತವೆ .ಕಾಡಿನಲ್ಲಿ ಸಿಗುವಂತಹ ಸೊಪ್ಪು ,ಹಣ್ಣು ,ಹೊಳೆಯಲ್ಲಿ ಸಿಗುವ ನೀರು, ಮಾಂಸಹಾರಿಗಳಿಗೆ ಕಾಡಿನ ಪ್ರಾಣಿಗಳು ಇವುಗಳೇ ಆಹಾರ

ಆದರೆ ಮಾನವ ತಾನೆ ಬೆಳೆದ ಆಹಾರ ಫಿಲ್ಟರ್ ನೀರು, ತಾನೇ ಬೆಳೆಸಿದ ಪ್ರಾಣಿಗಳ ಮಾಂಸ, ರಾಸಾಯನಿಕಯುಕ್ತ ಆಹಾರ ಇವುಗಳನ್ನು ಸೇವಿಸುತ್ತಾನೆ.

ಪ್ರಾಣಿಗಳು ಯಾವಾಗಲೂ ಕಾಡಿನೊಳಗೆ ವಾಸಿಸುತ್ತವೆ .ಅವರಿಗೆ ಇಷ್ಟವಾಗಿ ಗಾಳಿ-ಬೆಳಕು ಬಿಸಿಲು ಎಲ್ಲವೂ ಸಿಗುತ್ತದ. ಆದರೆ ಮಾನವನು ಕಟ್ಟಡದೊಳಗೆ ವಾಸಿಸುತ್ತಾನ. ಗಾಳಿ ಬೆಳಕು ಸ್ವಲ್ಪ ಸಿಕ್ಕರೂ ನೇರವಾದ ಬಿಸಿಲು ಅವನಿಗೆ ಸಿಗಲಾರದು. ಇಲ್ಲಿ ಕೃಷಿಕರಿಗೆ ಮಾತ್ರ ನೇರವಾದ ಬಿಸಿಲು ಸಿಗುತ್ತವೆ ಪ್ರಾಣಿಗಳು ಮತ್ತು ನಮ್ಮಲ್ಲಿ ಬಹುಮುಖ್ಯವಾದ ವ್ಯತ್ಯಾಸವಿರುವುದು ಪ್ರಾಣಿಗಳು ಯಥೇಷ್ಟವಾಗಿ ಬಿಸಿಲಲ್ಲಿ ಇರುತ್ತವೆ .ಆದರೆ ನಾವು ದಿನದಲ್ಲಿ ಎಷ್ಟು ಹೊತ್ತು ಬಿಸಿಲಲ್ಲಿ ಇರುತ್ತೇವೆ ?ಎಂಬುದು ಮುಖ್ಯ ಪ್ರಶ್ನೆಯಾಗಿದ.ಬಿಸಿಲನ್ನು ನಾವು ಅದು ಒಂದು ರೀತಿಯ ಆಹಾರ ಎಂದುತಿಳಿಯಬೇಕು. ಬಾಯಿಂದ ತೆಗೆದುಕೊಳ್ಳುವ ಆಹಾರದಷ್ಟೇ ಬಿಸಿಲು ಅಷ್ಟೇ ನಮ್ಮ ದೇಹಕ್ಕೆ ಮುಖ್ಯವಾಗಿದೆ .ಒಳ್ಳೆಯ ಆಹಾರವನ್ನು ಅಷ್ಟೇ ತೆಗೆದುಕೊಂಡರೆ ನಾವು ಸಾಲದು .ಅದರ ಜೊತೆಗೆ ಗಾಳಿ-ಬೆಳಕು ಬಿಸಿಲು ಎಲ್ಲವೂ ಬೇಕು. ನಾವು ಪರಿಪೂರ್ಣವಾದ ಆಹಾರವನ್ನು ತೆಗೆದುಕೊಂಡ ಹಾಗೆ ಆಯಿತು.

ನನ್ನ ಮುಖ್ಯವಾದ ಅಭಿಪ್ರಾಯವೇನೆಂದರೆ ಆಹಾರದ ವಿಚಾರದಲ್ಲಿ ಮೊದಲನೆಯ ಪ್ರಾಮುಖ್ಯತೆಯನ್ನು ನಾನು ಗಾಳಿ ಬಿಸಿಲು ಮತ್ತು ನೀರಿಗೆ ಕೊಡುತ್ತೇನೆ .ನಂತರದಲ್ಲಿ ಆಹಾರಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು. ಒಳ್ಳೆಯ ಗಾಳಿ ಬೆಳಕು ನೀರು ಇಲ್ಲದೆ ಎಷ್ಟೇ ಒಳ್ಳೆಯ ಆಹಾರ ತಿಂದರೂ ವ್ಯರ್ಥವೇ ಸರ.ಿ ಅದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಬಹಳಷ್ಟು ವೈರಸ್ಗಳು ಚಳಿಗಾಲದಲ್ಲಿ ಜಾಸ್ತ.ಿ ಏಕೆಂದರೆ ಆಗ ಬಿಸಿಲಿನ ಪ್ರಮಾಣ ಕಡಿಮೆ ಇರುತ್ತದೆ ಅಂದರೆ ಬಿಸಿಲಿನಲ್ಲಿ ಅವುಗಳ ಶಕ್ತಿ ಕಡಿಮೆಯಾಗುತ್ತದ. ಉಷ್ಣತೆಯಲ್ಲಿ ಅದರ ಉತ್ಪನ್ನ ಕಡಿಮೆ ಉದಾಹರಣೆಗೆ ಬಿಸಿಲಿನಲ್ಲಿ ಕೆಲಸಮಾಡುವ ಕಾರ್ಮಿಕರಿಗೆ ನೆಗಡಿಗೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಇರುತ್ತವೆ.

1920 ನೇ ಇಸವಿಯಲ್ಲಿ ಸ್ಪೇನ್ನಲ್ಲಿ ಸ್ಪ್ಯಾನಿಶ್ ಪ್ಯೂ ಬಂದಿತ್ತು .ಆಗ ಅಲ್ಲಿ ರೋಗಿಗಳನ್ನು ಬಿಸಿಲಿನಲ್ಲಿ ಮಲಗಿಸಿದಾಗ ಅದರತೀವ್ರತೆ ಕಡಿಮೆ ಆಯ್ತಂತೆ. ಅದರ ಅರ್ಥ ಬಿಸಿಲಿನಿಂದ ರೋಗನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತದೆ .ಯಾವುದೇ ನೆಗಡಿ ಕಫಕ್ಕೆ ಸಂಬಂಧಪಟ್ಟ ಕಾಯಿಲೆಗೆ ಔಷಧಗಳ ಜೊತೆಗೆ ಬಿಸಿಲು ಜೊತೆಗೆ ಬೇಕು ಆಗ ಅದು ಬಹಳ ಬೇಗ ಪರಿಣಾಮಕಾರಿಯಾಗುತ್ತದೆ ಅದರಿಂದ ನನ್ನ ಸಲಹೆ ಏನೆಂದರೆ ಕರೋನವೈರಸ್ ರೋಗಿಗಳಿಗೆ ಔಷಧಗಳ ಜೊತೆಗೆ ಬಿಸಿಲನ್ನು ಸೇವಿಸಲು ಸಲಹೆ ನೀಡಬೇಕು. ರೋಗಿಗಳಿಗೆ ಅವರವರ ಶಕ್ತಿಗೆ ತಡೆಯುವಷ್ಟು ಬಿಸಿಲನ್ನು ಅವರು ಸೇವಿಸಬೇಕು ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಅವರಲ್ಲಿ ರೋಗದ ತೀವ್ರತೆ ಕಡಿಮೆಯಾಗುತ್ತದೆ .

ೊನೆಯದಾಗಿ ನಾನು ಹೇಳುವುದೇನೆಂದರೆ ನಾವು ಆರೋಗ್ಯಕ್ಕಾಗಿ ಬಹಳಷ್ಟು ತಿನ್ನುವುದಕ್ಕಿಂತ ಸರಳವಾದ ನ್ಯಾಚುರಲ್ ಆದ ಆಹಾರ, ಬಿಸಿಲು, ನೀರು ಇವಷ್ಟೇ ಸಾಕು .ಆರೋಗ್ಯವಂತ ದೇಹ ಬೇಕೆಂದರೆ ದಿನಾಲು ಅರ್ಧ ಗಂಟೆಯಿಂದ ಒಂದು ತಾಸಾದರೂ ಬಿಸಿಲಿನಲ್ಲಿ ಸ್ವಲ್ಪವಾದರೂ ಬೆವರು ಬರುವಂತೆ ಕೆಲಸ ಮಾಡಬೇಕು.

ಸಾರಾಂಶ. ಯಾವುದೇ ವೈರಸ್ ಸಂಬಂಧಪಟ್ಟ ಉಸಿರಿನ ಕಾಯಿಲೆಗೆ ಔಷಧದ ಅಷ್ಟೇ ಪ್ರಾಮುಖ್ಯತೆ ಬಿಸಿಲು ಹೌದು ಅಂತಹ ರೋಗಿಗೆ ವೈದ್ಯರು ಬಿಸಿಲಿನಲ್ಲಿ ಮಲಗಲು ಅಥವಾ ಓಡಾಡಲು ಅಥವಾ ಗಟ್ಟಿಯಾಗಿದ್ದರೆ ಕೆಲಸ ಮಾಡಲು ಸಲಹೆ ನೀಡಬೇಕು. ಇದರಿಂದ ರೋಗನಿರೋಧಕ ಶಕ್ತಿ ಬರುತ್ತದೆ.

ಆಡು ಮುಟ್ಟದ ಸೊಪ್ಪು

Read moreಕರೋನವೈರಸ್ ತಡೆಗೆ. How to control cold virus.

3 Best Corona Virus Home Treatment (Get Cure from Covid 19)

Inhibition of coronavirus
Now I have come up with the idea of ​​solving it in some way where coronavirus is causing trouble in the world.

Different kinds of food in the world is fashion. People like a variety of foods such as ready-made food, cold, hot, oil without oil, fruit and whole-grain plants. But this is not the case in animals. They cannot eat this type of food. Yet, the question of how animals are healthier than us must be on everyone’s mind.

Animals eat foods that are natural to animals. Green, fruit, sparkling water, carnivorous etc.

But human food consumes water filtered water, self-contained animal meat, and chemical food.

Animals always live in the jungle. They can get everything from wind-light to sunny. But the human lives inside the building. He could not get a direct sunlight, even if it was a bit of wind light. Farmers get direct sunlight. The most important difference between us and the animals is that they stay in the sun. Sunburn is just as important to our body as it is eating foods. 

My main point is that I give the first importance to food, air and water . Then, food should be given importance. Eating good food without good light, air and water is a waste, and it reduces immunity.

Most viruses are origins in the winter, because the amount of sunlight is low, which means their energy is reduced in the sun. Reducing its product in temperature, for example, workers who work in the sun will have fewer colds.

In the 1920s, the Spanish flue arrived in Spain.  In that time, doctors put patients outside beds. So that they get fresh light and air. The sunburn increases immunity in the body. Any cold-related disease can be accompanied by sunburn with medication. Patients should consume enough heat to block their energy so that immunity often reduces the severity of the disease.

Summary. The important medicine for any viral respiratory illness is sunburn. Yes, the doctor should advise sleeping in the sun. It boosts immunity.

Fenugreek seeds Juice

Ingredients.

1. Half cup of Fenugreek seeds.

2. Taste to jaggery.

3. Taste to ellachi powder (pinch)

.4. One cup milk

.How to make.

Soaking the fenugreek seeds in the water for two hours. After grind in juicer or mixer. Add milk, jaggery, and ellachi, two cups of water.It is healthy for diabetic patient.

Pumpkin Juice.

Ingredients

1. Pumpkin (2 pieces with seeds)

2. Àpple or sapota,little jeera.

3 Taste to salt or 2 spoon honey.

4.one cup of water.

How to make

All of these grind in juicer.It’s very healthy (tonic).

Pumpkin seeds are high in magnesium, fiber&good fatty acids. Studies have suggested that some of the micromolecules in pumpkin seeds may help manage blood sugar low magnesium levels are common in people with insulin resistance.Which is one reason why diabetes occurs.

ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ ಆದ್ದರಿಂದ ಡಯಾಬಿಟಿಸ್ ನವರು ವಾರಕ್ಕೆರಡು ಬಾರಿಯಾದರೂ ಕುಂಬಳಕಾಯಿಯನ್ನು ತಿನ್ನಬೇಕು ಇದು ದೇಹದಲ್ಲಿ ಕ್ಯಾನ್ಸರ್ ಸೇಲ್ಸ್ ಹೆಚ್ಚುವುದನ್ನು ಕಡಿಮೆ ಮಾಡುತ್ತದೆ ಇದು ಒತ್ತಡ ನಿದ್ರಾಹೀನತೆ ಖಿನ್ನತೆ ದೂರಮಾಡುತ್ತದೆ ನೆನಪಿನ ಶಕ್ತಿಗೆ ಒಳ್ಳೆಯದು ಇದರಲ್ಲಿ ವಿಟಮಿನ್ ಇ ಇರುವುದರಿಂದ ಕಣ್ಣಿಗೂ ಒಳ್ಳೆಯದು ಇದಕ್ಕೆ ರುಚಿ ಬರಲು ನೆಲ್ಲಿಕಾಯಿಯನ್ನು ಸೇಬುಹಣ್ಣನ್ನು ಸೇರಿಸಿ ಜ್ಯೂಸ್ ಮಾಡಬಹುದು ಕುಂಬಳಕಾಯಿಯಲೇಹ ಶರೀರಕ್ಕೆ ಒಳ್ಳೆಯದು ಶರೀರವನ್ನು ಪುಷ್ಟಿ ಯನ್ನಾಗಿ ಮಾಡುತ್ತದೆ

Sensitive leaves

“Touch me not”

Ingredients

1. One fistful of sensitive leaves.

2 One spoon jeera.

3 1/2 cup coconut solution.

4. One cup of buttermilk or lemon..

5. Taste to salt or jaggery.

How to make .

Rosting(little), jeera and leaves in ghee or coconut oil. After grinding it smooth paste. Finally add to the. 3,4,5.

Juice is ready.

It controls constipation.But you must take only 1/2 cup in a day.

Henna leaves.

Ingredients.

1 Half fistful of henna leaves.

2.Half of lemon.

3. 2 or 3 spoon of honey.

4. One spoon jeera.

5 Ginger 1″

How to make

Boil the henna leaves and jeera, ginger in two cups of water ten minutes. Water converts red colours.Filter it. Add honey and lemon.Juice is ready.

It helps ladies for monthly period .

It is Rich sources of iron.